ರೋಹಿತ್ ಖಂಡೇಲ್‍‍​‍‍‍‍ವಾಲ್ (ಜನನ: ೧೯ ಆಗಸ್ಟ್ ೧೯೮೯) ಒಬ್ಬ ಭಾರತೀಯ ರೂಪದರ್ಶಿ, ನಟ, ದೂರದರ್ಶನ ನಿರೂಪಕ, ಮಿಸ್ಟರ್ ಇಂಡಿಯಾ-೨೦೧೫ರ ವಿಜೇತ, ಮತ್ತು ೨೦೧೬ರ ಮಿಸ್ಟರ್ ವರ್ಲ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡ ಮೊದಲ ಏಷ್ಯನ್ ಆಗಿದ್ದಾರೆ. == ಆರಂಭಿಕ ಜೀವನ ಮತ್ತು ವೃತ್ತಿಜೀವನ == ಬಾಲಿವುಡ್ ನಟಿ ಕರೀನಾ ಕಪೂರ್‍ರೊಡನೆ ನಟಿಸಿದ ಆಭರಣದ ಜಾಹೀರಾತೊಂದು ರೋಹಿತ್‍ರನ್ನು ಮಾಡೆಲಿಂಗ್ ಜಗತ್ತು ಗುರುತಿಸುವಂತೆ ಮಾಡಿತು. ತದನಂತರ ಇವರಿಗೆ ಸಾಕಷ್ಟು ಜಾಹೀರಾತುಗಳಲ್ಲಿ ಅವಕಾಶ ದೊರಕಿತು. ಬಿಂದಾಸ್ ವಾಹಿನಿಯ 'ಯೆ ಹೇ ಆಶಿಕಿ'ಯ ೭೬ನೇ ಸಂಚಿಕೆಯ ಮೂಲಕ ಇವರು ದೂರದರ್ಶನ ನಟರಾದರು. ನಂತರದಲ್ಲೀ ಇವರು ಚಾನಲ್ ವಿಯ 'ಮಿಲಿಯನ್ ಡಾಲರ್ ಗರ್ಲ್' ಎಂಬ ಧಾರಾವಾಹಿಯಲ್ಲಿ ಭುವನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು. ಹೈದರಾಬಾದಿನಲ್ಲಿ ಬೆಳೆದವರಾದರೂ, ಇವರು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಲು ಹಲವಾರು ಹಿಂದಿ ತರಗತಿಗಳನ್ನು ತೆಗೆದುಕೊಳ್ಳಬೇಕಾಯಿತು. ೨೦೧೫ರಲ್ಲಿ ಇವರು ಮುಂಬೈನ ಕ್ಲಬ್ ರಾಯಲ್ಟಿಯಲ್ಲಿ ನಡೆದ ಮಿಸ್ಟರ್ ಇಂಡಿಯಾ ೨೦೧೫ ಸ್ಪರ್ಧೆಯ ವಿಜೇತರಾದರು. ಅದೇ ಸ್ಪರ್ಧೆಯಲ್ಲಿ ಅವರು "ಅತ್ಯಂತ ಸಕ್ರಿಯಶೀಲ" ಮತ್ತು "ಅತ್ಯುತ್ತಮ ಮೈಯಕ್ತಿಕ ಕಾಳಜಿಯ ನಟ" ಎಂಬೆರಡು ವಿಶೇಷ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. == ದೂರದರ್ಶನ == == ==